ಸಹಭಾಗಿಗಳು
ಪ್ರತಿಭಾವಂತ ವಿದ್ಯಾರ್ಥಿಗಳ ಏಳ್ಗೆ ಬಯಸಿ ಆ ದಿಕ್ಕಿನಲ್ಲಿ ಕಾರ್ಯತತ್ಪರವಾಗಿರುವ ಸಂಸ್ಥೆಗಳು ಜೊತೆಗೂಡಿ ಕೆಲಸ ಮಾಡುವುದು ಅಪೇಕ್ಷಣೀಯವೂ ಹೌದು ಮತ್ತು ಯಶಸ್ಸಿನ ಗುರುತೂ ಸಹ ಹೌದು.
ಶ್ರೀಮತಿ ಎಂ. ಕೆ. ಜಯಮ್ಮ ಮತ್ತು ಶ್ರೀ. ಬಿ. ಎಸ್. ಆರ್. ಶಾಸ್ತ್ರಿ ದತ್ತಿ ಮತ್ತು ಉದ್ಯಮ್ ಸಾರ್ವಜನಿಕ ದತ್ತಿ (ಉದ್ಯಮ್) ಗಳು ವಿವಿಧ ಕ್ಷೇತ್ರಗಳಲ್ಲಿ ವೃತ್ತಿಪರರಾಗಬೇಕೆನ್ನುವ ಕನಸನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಸಹಾಯ ಮತ್ತು ಪ್ರೇರೇಪಣೆಗಳನ್ನು ನೀಡುತ್ತಿವೆ. ಆರ್ಥಿಕ ಸಹಾಯವು ವಿದ್ಯಾರ್ಥಿಗಳಿಗೆ ಪರಿಶ್ರಮ ವಹಿಸಲು ಉತ್ತೇಜಿಸಿದರೆ, ಸಾರ್ವಜನಿಕ ಸಂಸ್ಥೆಗಳ ಜೊತೆಯ ಒಡನಾಟ ವಿದ್ಯಾರ್ಥಿಗಳ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ.
ಶ್ರೀಮತಿ ಎಂ. ಕೆ. ಜಯಮ್ಮ ಮತ್ತು ಶ್ರೀ. ಬಿ. ಎಸ್. ಆರ್. ಶಾಸ್ತ್ರಿ ದತ್ತಿ ಮತ್ತು ಉದ್ಯಮ್ ಅರ್ಹತೆಯ ಮಾನದಂಡದಿಂದ ಮಾತ್ರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತವೆ. ಎಲ್ಲಾ ತರಗತಿ / ಪರೀಕ್ಷೆಗಳಲ್ಲಿ ಶೈಕ್ಷಣಿಕ ಸಾಮರ್ಥ್ಯ ಪ್ರದರ್ಶಿಸಿರುವ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆಗೆ ಪರಿಗಣಿಸಲಾಗುತ್ತದೆ. ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಮಾದರಿ ಸಾಧಕರನ್ನು ಪರಿಚಯ ಮಾಡುವ ಮತ್ತು ಹೊಸ ಸಾಧ್ಯತೆಗಳನ್ನು ತೋರಿಸುವುದರ ಗುರಿಯೊಂದಿಗೆ ಯೋಜಿಸಲಾಗುತ್ತದೆ.
ಕಳೆದ ವರ್ಷಗಳಲ್ಲಿ ಪುರಸ್ಕೃತರಾದ ಹಲವಾರು ವಿದ್ಯಾರ್ಥಿಗಳು ಈಗ ವಿಜ್ಞಾನ, ಕಲೆ, ವಾಣಿಜ್ಯ, ತಾಂತ್ರಿಕ, ವೈದ್ಯಕೀಯ, ಕೃಷಿ, ಇನ್ನಿತರ ಪದವಿಗಳ ಅಧ್ಯಯನದಲ್ಲಿ ತೊಡಗಿದ್ದಾರೆ. ಶ್ರೀಮತಿ ಎಂ. ಕೆ. ಜಯಮ್ಮ ಮತ್ತು ಶ್ರೀ. ಬಿ. ಎಸ್. ಆರ್. ಶಾಸ್ತ್ರಿ ದತ್ತಿ ಮತ್ತು ಉದ್ಯಮ್ ಸಂಸ್ಥೆಗಳು ತಮ್ಮ ಗುರಿಯತ್ತ ಯಶಸ್ವಿಯಾಗಿ ಮುನ್ನಡೆಯುತ್ತಿವೆ.
ಶ್ರೀಮತಿ ಎಂ. ಕೆ. ಜಯಮ್ಮ ಮತ್ತು ಶ್ರೀ. ಬಿ. ಎಸ್. ಆರ್. ಶಾಸ್ತ್ರಿ ದತ್ತಿಯ ಬಗ್ಗೆ
ಶ್ರೀಮತಿ ಎಂ. ಕೆ. ಜಯಮ್ಮ ಮತ್ತು ಶ್ರೀ. ಬಿ. ಎಸ್. ಆರ್. ಶಾಸ್ತ್ರಿ ದತ್ತಿಯ ಒಂದು ಸಾರ್ವಜನಿಕ ಸಂಸ್ಥೆಯಾಗಿದ್ದು ಜಾಗತಿಕ ಮೌಲ್ಯಗಳಿಗೆ ಬದ್ಧವಾಗಿದೆ. ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಸಂಸ್ಕೃತಿ – ಈ ಪರಿಧಿಯಲ್ಲಿ ಕಾರ್ಯತತ್ಪರವಾಗಿದೆ. ಈ ದತ್ತಿಯ ವಿಶೇಷತೆಯೆಂದರೆ ಶ್ರೀ. ಬಿ. ಎಸ್. ಆರ್. ಶಾಸ್ತ್ರಿ ಕುಟುಂಬದ ಸದಸ್ಯರೇ – ಹೊರಗಿನ ಅಥವಾ ಸಾರ್ವಜನಿಕ ಸಹಾಯವನ್ನು ಕೇಳದೇ – ಎಲ್ಲಾ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸುತ್ತಿರುವುದು. ದತ್ತಿಯು ತನ್ನ ಆಡಳಿತ, ಲೆಕ್ಕ ಇತ್ಯಾದಿಗಳ ವಿಚಾರಗಳಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯುತ ವಿಧಾನಗಳನ್ನು ಅಳವಡಿಸಿಕೊಂಡಿದೆ. ಕಳೆದ ಐದು ವರ್ಷಗಳಲ್ಲಿ ಸುಮಾರು 400 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಶಿಕ್ಷಣಕ್ಕೆ ದತ್ತಿ ಸಹಕರಿಸಿದೆ. ಇದಲ್ಲದೇ, ಹಲವಾರು ಸಾರ್ವಜನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳಿಗೆ ದತ್ತಿ ಸಹಾಯ ಒದಗಿಸಿದೆ. ಮಾಲೂರಿನ ಸರ್ಕಾರಿ ಶಾಲೆ, ಸರಗೂರಿನ ವಿವೇಕ ಶಾಲೆ, ಹೊಸಹಳ್ಳಿಯ ಬುಡಕಟ್ಟು ಶಾಲೆ, ಸೋ-ಕೇರ್ ಸಂಸ್ಥೆ, ವೇದ ನಾದ ಗುರುಕುಲ, ನೆಲೆ ಸಂಸ್ಥೆ, ಪ್ರಪಂಚ ಸ್ಕೂಲ್ ಆಫ್ ಮ್ಯೂಸಿಕ್ ಇವುಗಳಿಗೆ ಧನ ಸಹಾಯವನ್ನು ದತ್ತಿ ಒದಗಿಸಿದೆ. ಇಲ್ಲಿಯವರೆಗೆ, ದತ್ತಿಯು ಸುಮಾರು 20 ಜನ ಸಮಾಜ ಮುಖೀ ಗಣ್ಯರನ್ನು ಗುರುತಿಸಿ ಅವರಿಗೆ ಸನ್ಮಾನ ಸಲ್ಲಿಸಿದೆ. ಇತರ ಸಮಾನ ಮನಸ್ಕ ವ್ಯಕ್ತಿಗಳು ಮತ್ತು ಸಂಸ್ಥೆಗಳ ಜೊತೆ ಸಹಕರಿಸುತ್ತಾ ಹೆಚ್ಚಿನ ಸಾಮಾಜಿಕ ಹಿತಕ್ಕೆ ದತ್ತಿ ತನ್ನ ಬದ್ಧತೆ ತೋರಿಸುತ್ತಿದೆ.
ಉದ್ಯಮ್ ಸಾರ್ವಜನಿಕ ದತ್ತಿಯ ಬಗ್ಗೆ
http://www.udyam.org
ಉದ್ಯಮ್ ಒಂದು ಸಾರ್ವಜನಿಕ ದತ್ತಿಯಾಗಿದ್ದು, ಸಮಾನ ಮನಸ್ಕ ವೃತ್ತಿಪರರಾರಿಂದ 2011 ರಲ್ಲಿ ಸ್ಥಾಪಿಸಲ್ಪಟ್ಟಿದೆ. ಉದ್ಯಮ್ ಸ್ಕಾಲರ್ (ಉದ್ಯಮ್ ವಿದ್ಯಾರ್ಥಿ) ಕಾರ್ಯಕ್ರಮವನ್ನು ದತ್ತಿ ಹಮ್ಮಿಕೊಂಡಿದ್ದು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಯಶಸ್ವಿಯಾಗಿ ಗುರುತಿಸಲಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಸುಮಾರು 30 ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಸಹಾಯ – ಮಾರ್ಗದರ್ಶನವನ್ನು ಉದ್ಯಮ್ ಮಾಡಿದೆ. ಉದ್ಯಮ್ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ತೋರಿಸಿದ್ದು, 9 ವಿದ್ಯಾರ್ಥಿಗಳು ಇಂಜಿನೀರಿಂಗ್, ಒಬ್ಬರು ವೈದ್ಯಕೀಯ, ಇಬ್ಬರು ಸಿಪಿಟಿ (ಸಿಏ ಮಾಡಲು ಪಾಸಾಗಬೇಕಾದ ಅರ್ಹತಾ ಪರೀಕ್ಷೆ) ಮತ್ತು ಇತರರು ಪಿಯುಸಿ ಅಧ್ಯಯನ ಮಾಡುತ್ತಿದ್ದಾರೆ.
ಡಿಜಿಟಲ್ ಕಂದರವನ್ನು ಕಡಿಮೆ ಮಾಡುವ ಉದ್ದೇಶದಿಂದ ಉದ್ಯಮ್ ಹಲವಾರು ಕಾರ್ಯಕ್ರಮಗಳನ್ನು ನಿರ್ವಹಿಸಿದೆ. ಆಧುನಿಕ ಕಂಪ್ಯೂಟರ್ ಪ್ರಯೋಗ ಶಾಲೆಗಳು, ಡಿಜಿಟಲ್ ತರಗತಿಗಳು, ಅಂಡ್ರಾಯ್ಡ್ ಅಪ್ಲಿಕೇಷನ್ ಅಭಿವೃದ್ಧಿ ಪ್ರಯೋಗ ಶಾಲೆಗಳು, ವಿಜ್ಞಾನ ಪ್ರಯೋಗ ಶಾಲೆಗಳು – ಇವುಗಳನ್ನು ಹಲವಾರು ಶಾಲೆ ಮತ್ತು ಪಾಲಿಟೆಕ್ನಿಕ್ ಗಳಲ್ಲಿ ಉದ್ಯಮ್ ಸ್ಥಾಪಿಸಿದೆ.